Wednesday, December 7, 2022

ವಿಜ್ಞಾನ ಕಿಟ್ ಪರಿಚಯ ಕಾರ್ಯಾಗಾರ ಹಾಗೂ ವಿಜ್ಞಾನ ಭಿತ್ತಿ ಪತ್ರಗಳ ವಿತರಣಾ ಕಾರ್ಯಕ್ರಮ

 

ಸಮಗ್ರ ಶಿಕ್ಷಣ ಕರ್ನಾಟಕ,ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಲಬುರ್ಗಿ ಹಾಗೂ ಲಿಟರಸಿ ಪ್ರಾಕಜೆಕ್ಟ್ ಬೆಂಗಳೂರು ಇವರ ಸಹಯೋಗದಲ್ಲಿ ದಿನಾಂಕ 02-12-2022 ರಂದು ಕೆ.ಪಿ.ಎಸ್. ಚಂದಾಪೂರ ಶಾಲೆಯಲ್ಲಿ "ವಿಜ್ಞಾನ  ಕಿಟ್ ನ ಬಳಕೆ" ಕುರಿತು ಪ್ರಧಾನ ಸಂಪನ್ಮೂಲ ಶಿಕ್ಷಕರಿಗೆ  ಒಂದು ದಿನದ ಕಾರ್ಯಾಗಾರದಲ್ಲಿ ಮಾನ್ಯ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ನಾಗಶಟ್ಟಿ ಭದ್ರಶಟ್ಟಿ ರವರು ಉದ್ಘಾಟಿಸಿ ತರಗತಿ ಸನ್ನಿವೇಶದಲ್ಲಿ ಉದ್ಭವಿಸುವ ಏನು,ಏಕೆ ಮತ್ತು ಹೇಗೆ  ಎನ್ನುವ ಪ್ರಶ್ನೆಗಳಿಗೆ ಈ ಕಿಟ್ ನಲ್ಲಿರುವ ಉಪಕರಣಗಳ ಮೂಲಕ ಸುಲಭವಾಗಿ ತಿಳಿಸಬಹುದಾಗಿದೆ ಎಂದು ಹೇಳಿದರು,ಈ ಕಾರ್ಯಾಗಾರದಲ್ಲಿ ಇಂಡಿಯಾ ಲಿಟರಸಿ ಪ್ರೊಜೆಕ್ಟ್ ನ ತಾಂತ್ರಿಕ ಸುಗಮಕಾರರಾಗಿ ಶ್ರೀ ವೆಂಕಟೇಶ ಹಾಗೂ ಪ್ರಿಯಾ ಭಾಗವಹಿಸಿ ಮಾರ್ಗದರ್ಶನ ನೀಡಿದರು ಮತ್ತು ಕಿಟ್ ನ ಪರಿಚಯವನ್ನು ಶ್ರೀ ರಾಚಯ್ಯ ಸ.ಶಿ.ಸ.ಪ್ರೌಢ ಶಾಲೆ ಐನೋಳಿ ಹಾಗೂ ಶ್ರೀ ಮಹದೇವಯ್ಯ ಸ.ಶಿ. ಸ.ಪ್ರೌಢ ಶಾಲೆ ಗರಪಳ್ಳಿ ಇವರು ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿಕೊಟ್ಟರು...ರಾಜಶೇಖರ ಬಿ.ಆರ್.ಪಿ. ರಘುನಾಥ.ಮು.ಗು. ಗಳು ಕೆ.ಪಿ.ಎಸ್ ಚಂದಾಪೂರ ಮತ್ತಿತರರು ಹಾಜರಿದ್ದರು.