Friday, October 6, 2023

ವಿಷಯ ಶಿಕ್ಷಕರ ವೇದಿಕೆ (ಹಿಂದಿ ಮತ್ತ ಸಮಾಜ ವಿಜ್ಞಾನ ಶಿಕ್ಷಕರಿಗಾಗಿ)

 

ದಿನಾಂಕ 06-10-2023 ರಂದು ಆದರ್ಶವಿದ್ಯಾಲಯ ಪೋಲಕಪಳ್ಳಿ.ಶಾಲೆಯಲ್ಲಿ ಇಲ್ಲಿ ಸಮಾಜ ವಿಜ್ಞಾನ ಶಿಕ್ಷಕರಿಗಾಗಿ ಹಮ್ಮಿಕೊಂಡ  ಸಮಾಲೋಚನೆ ಸಭೆಯಲ್ಲಿ ಮಾನ್ಯ ಕ್ಷೇತ್ರಶಿಕ್ಷಣಾಧಿಕಾರಿಗಳು ವಿಷಯ ಶಿಕ್ಷಕರ ವೇದಿಕೆಯಲ್ಲಿ"ಮೂರು ವರ್ಷದ ಮುನ್ನೋಟ" ಕಾರ್ಯಕ್ರಮವನ್ನು ಸಸಿಗೆ ನೀರು ಎರೆಯುದರ ಮೂಲಕ ಉದ್ಘಾಟಿಸಿ ಈ ಕಾರ್ಯಾಗಾರಕ್ಕೆ 8 ,9.& 10 ನೇ ತರಗತಿಯಲ್ಲಿ A B  & C ಗ್ರೇಡ್ ಪಡೆದ ಮಕ್ಕಳ ಪಟ್ಟಿಯೊಂದಿಗೆ ಹಾಜರಾದ ಶಿಕ್ಷಕರಿಗೆ ಮೂರು ವರ್ಷದಲ್ಲಿ ಗುಣಾತ್ಮಕ ಕಲಿಕೆಯೊಂದಿಗೆ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡುವಲ್ಲಿ ತಮ್ಮ ಪಾತ್ರ ಪ್ರಮುಖವಾದುದು ಎಂದು ಕಿವಿ ಮಾತು ಹೇಳಿದರು. ಮತ್ತು ಸ.ಸಭೆಯನ್ನು ಅಚ್ಚುಕಟ್ಟಾಗಿ ಆಯೋಜಿಸಿದ ಆದರ್ಶ ವಿದ್ಯಾಲಯ ಶಾಲೆಯ ಪ್ರ.ಮು.ಗು.ಗಳಾದ ಶ್ರೀ ನಾಗಶಟ್ಥಿ ಭದ್ರಶಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು ಮತ್ತು ಸ.ವಿಜ್ಞಾನ  ವಿಷಯದ ಮುಖ್ಯ ನೋಡಲ್ ಅಧಿಕಾರಿಗಳಾದ ಶ್ರೀ ನಂದಕುಮಾರ ಮು.ಗು.ಗರಗಪಳ್ಳಿ ಹಾಗೂ ಹಿಂದಿ ವಿಷಯದ ನೋ.ಅ.ಗಳಾದ ಶ್ರೀ ಶಂಕರನಾಯಕರವರು ಮುಖ್ಯ ಅತಿಥಿಗಳಾಗಿ ಗುಣಾತ್ಮಕ ಶಿಕ್ಷಣದಲ್ಲಿ ತಮ್ಮ ಪಾತ್ರ ಪ್ರಮುಖವಾದುದು ಸಮ ಆಲೋಚನೆಯುಳ್ಳ ಸಮಾನ ಮನಸ್ಕರ ವೇದಿಕೆಯಲ್ಲಿ ಪಡೆದ ಜ್ಞಾನದ ಸದುಪಯೋಗವಾಗಲಿ ಎಂದು ಶುಭ ಹಾರೈಸಿದರು.ಇದೇ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷರಾದ ಶ್ರೀ ಮಾರುತಿ ಪತಂಗೆ ಸರ್,ಪ್ರೌಢ ಶಾಲಾ ಸ.ಶಿ.ಸಂಘದ ಅಧ್ಯಕ್ಷರಾದ ಶ್ರೀ ಖುರ್ಷೀದ ಅಲಿ ಸರ್  ಗುಣಾತ್ಮಕ ಕಲಿಕೆಗೆ ಒತ್ತು ನೀಡಿ ಬ್ಲಾಕ್ ನ ಫಲಿತಾಂಶ ಹೆಚ್ಚಳಕ್ಕೆ ಪ್ರಯತ್ನಿಸಲು ಸಲಹೆ ನೀಡಿದರು ರ ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಸವಂತರೆಡ್ಡಿ ಹಾಗೂ ಶ್ರೀ ಮಲ್ಲಿನಾಥ ಸರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು....