Saturday, September 3, 2022

ಬ್ಲಾಕ್ ಹಂತದ "ವಿಜ್ಞಾನ ವಿಚಾರ ಗೋಷ್ಠಿ" ಮತ್ತು "ವಿಜ್ಞಾನ ನಾಟಕ" ಸ್ಪರ್ಧೆ


 ಇಂದು ದಿನಾಂಕ 03-09-2022 ರಂದು ಕೆ.ಪಿ.ಎಸ್ ಪ್ರೌಢ ಶಾಲೆ ಚಂದಾಪೂರ ಇಲ್ಲಿ ಆಯೋಜಿಸಿರುವ ಬ್ಲಾಕ್ ಹಂತದ "ವಿಜ್ಞಾನ ನಾಟಕ" ಸ್ಪರ್ಧೆಯಲ್ಲಿ ಸ.ಉ.ಪ್ರೌಢ ಶಾಲೆ ಸುಲೆಪೇಟ್ ಪ್ರಥಮ,ಕೆ.ಪಿ.ಎಸ್.ದ್ವಿತೀಯ ಸ್ಥಾನ ಹಾಗೂ ವಿಶ್ವ ವಾಹಿನಿ ಪ್ರೌಢ ಶಾಲೆ ಐನಾಪೂರ ತೃತೀಯ ಸ್ಥಾನ ಪಡೆದಿರುತ್ತಾರೆ. ಮತ್ತು "ವಿಜ್ಞಾನ ವಿಚಾರಗೋಷ್ಟಿ"ಯಲ್ಲಿ ಸ.ಪ್ರೌಢ ಶಾಲೆ.ಐನೋಳಿ ಪ್ರಥಮ ಸ್ಥಾನ,ಕೆ.ಪಿ.ಎಸ್.ಚಂದಾಪೂರ ದ್ವಿತೀಯ ಸ್ಥಾನ ಹಾಗೂ ವಿಶ್ವ ವಾಹಿನಿ ಪ್ರೌಢ ಶಾಲೆ ಐನಾಪೂರ ತೃತೀಯ ಸ್ಥಾನ ಪಡೆದಿರುತ್ತಾರೆ.ಈ ಸಂದರ್ಭದಲ್ಲಿ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸುತ್ತಾ ಶುಭ ಕೋರಿ ಜಿಲ್ಲಾ ಹಂತದಲ್ಲಿಯೂ ಕೂಡ ಪ್ರಶಸ್ತಿ ಪಡೆಯಲಿ ಎಂದು ಶುಭ ಹಾರೈಸಿದರು ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿಗಳು ಅಕ್ಷರ ದಾಸೋಹ ಸಹಾಯಕ ನಿರ್ದೇಶಕರು. ಕೆ.ಪಿ.ಎಸ್.ಶಾಲೆಯ ಪ್ರಭಾರಿ ಮು.ಗು.ಗಳು,ವಿವಿಧ ಶಾಲೆಯ ಸಹ ಶಿಕ್ಷಕರುಗಳು ಮತ್ತು ತೀರ್ಪುಗಾರರು ಹಾಗೂ ತಾಲೂಕಾ ನೋಡಲ್ ಅಧಿಕಾರಿಗಳು ಭಾಗವಹಿಸಿದರು. ದೈಹಿಕ ಶಿಕ್ಷಕರಾದ ಶ್ರೀ ಶಾಮರಾವ ಮೋಘಾ ಸರ್ ರವರ ಕಾರ್ಯಕ್ರಮ ನಿರೂಪಣೆಯೊಂದಿಗೆ ಅಚ್ಚುಕಟ್ಟಾಗಿ ನಡೆಸಿಕೊಟ್ಟರು .

No comments:

Post a Comment