Friday, February 9, 2024

"ಸಂವಿಧಾನ ಜಾಗೃತಿ ಜಾಥಾ"


           ಭಾರತದ ಭಾಗ್ಯವಿಧಾತ , ಸಂವಿಧಾನದ ಶಿಲ್ಪಿ , ಸಂವಿಧಾನದ ಪಿತಾಮಹ , ದೀನದಲಿತರ ನಾಯಕ , ಆಗಿರುವಂತಹ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನವನ್ನು ರಚನೆ ಮಾಡಿ ಭಾರತಕ್ಕೆ ಸಮರ್ಪಣೆ ಮಾಡಿ 75 ವರ್ಷಗಳು ಗತಿಸಿದ ಸವಿನೆನಪಿಗಾಗಿ  ಇಂದು ದಿನಾಂಕ 09/02/2024 ರಂದು "ಸಂವಿಧಾನ ಜಾಗೃತಿ ಜಾಥಾ" ರಥವು ಹೊಡೆಬೀರನಳ್ಳಿ ಗ್ರಾಮಕ್ಕೆ ಆಗಮಿಸಿದ ಸಂದರ್ಭದಲ್ಲಿ  ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಎಲ್ಲ ಶಾಲೆಗಳ ಶಿಕ್ಷಕರು , ವಿದ್ಯಾರ್ಥಿಗಳು , ಎಲ್ಲ ಸಂಘ - ಸಂಸ್ಥೆಗಳ  ಮುಖಂಡರು , ಕಾರ್ಯಕರ್ತರು ಹಾಗೂ ಹೊಡೆಬಿರನಳ್ಳಿ ಗ್ರಾಮದ ಎಲ್ಲ ಪಾಲಕ ಪೋಷಕರು , SDMC ಸರ್ವ ಪದಾಧಿಕಾರಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು ಸಂವಿಧಾನ ಜಾಗೃತಿ ಉಪನ್ಯಾಸವನ್ನು ಶ್ರೀ ರೇವಣಸಿದ್ದಪ್ಪ ದಂಡಿನ ಸ.ಶಿ.ಸ.ಪ್ರೌಢ ಶಾಲೆ ಗರಗಪಳ್ಳಿ ಶಿಕ್ಷಕರು ನೀಡಿದರು.ಮತ್ತು ಈ ಕಾರ್ಯಕ್ರಮದ ಉಸ್ತುವಾರಿ ಸ.ಹಿ.ಪ್ರಾ.ಶಾಲೆ ಗಣಾಪೂರ ಶಾಲೆ (RMSA) ಯ ದೈಹಿಕ ಶಿಕ್ಷಕರು ವಹಿಸಿಕೊಂಡಿದ್ದರು.

 

No comments:

Post a Comment