Friday, August 26, 2022

ಸ.ಕಿ.ಪ್ರಾ.ಶಾಲೆ ಕೊರವಿ ಸಣ್ಣ ತಾಂಡಾ


 ಸ.ಕಿ.ಪ್ರಾ.ಶಾಲೆ ಕೊರವಿ ಶಿಕ್ಷಕರಿಲ್ಲದ ಶಾಲೆಗೆ  ನಿಯೋಜಿತ ಶಿಕ್ಷಕರ ಹಾಗೂ ಅತಿಥಿ ಶಿಕ್ಷಕರ ಕ್ರಿಯಾಶೀಲ ಚಟುವಟಿಕೆಗಳಿಂದ ಮಕ್ಕಳ ಕಲಿಕೆಗೆ ಜೀವಕಳೆ ತುಂಬಿದೆ.

Saturday, August 20, 2022

"ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ"


  1.   " ಜಿಲ್ಲಾಧಿಕಾರಿಗಳ ನಡೆ-ಹಳ್ಳಿ ಕಡೆ"  ನಿಮಿತ್ಯ "ಗ್ರಾಮ ವಾಸ್ತವ್ಯ"ಕಾರ್ಯಕ್ರಮದಲ್ಲಿ ದಿನಾಂಕ 20-08-2022 ರಂದು ಗೌಡನಹಳ್ಳಿ ಗ್ರಾಮದಲ್ಲಿ ಮಾನ್ಯ ತಹಶೀಲ್ದಾರರಾದ ಶ್ರೀಮತಿ ಅಂಜುಮ್ ತಬ್ಸುಮ್ ಮೇಡ್ ಮ್ ಹಾಗೂ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ರಾಚಪ್ಪ ಭದ್ರಶೆಟ್ಟಿ ಹಾಗೂ ತಾಲೂಕಾ ಅಕ್ಷರ ದಾಸೋಹ ಸಹ ನಿರ್ದೇಶಕರಾದ ಶ್ರೀ  ಜಯಪ್ಪ ಚಾಪೆಲ್ ಸರ್ ರವರು ಭಾಗವಹಿಸಿ ಗ್ರಾಮದ ಕುಂದು ಕೊರತೆಗಳ ಹಾಗೂ ಶೈಕ್ಷಣಿಕ ಕುಂದು ಕೊರತೆಗಳ ಬಗ್ಗೆ ಪರಿಶೀಲಿಸಿದರು..

Wednesday, August 17, 2022

ಮಕ್ಕಳ ಸ್ನೇಹಿ ಶಾಲೆ


 RLHP ಸಂಸ್ಥೆ ಯವರು ಆಯೋಜಿಸಿರುವ "ಮಕ್ಕಳ ಸ್ನೇಹಿ ಶಾಲೆಯನ್ನಾಗಿಸಲು ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ತರುವಲ್ಲಿ ಶಿಕ್ಷಕರ ಪಾತ್ರ"ಕುರಿತು ಒಂದು ದಿನದ ಕಾರ್ಯಾಗಾರವನ್ನು ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಾ,ದಾಖಲಾದ ದಿನದಿಂದ ಮಕ್ಕಳ ಹಾಜರಾತಿಯನ್ವಯ ಹೆಚ್ಚು ದಿನ ಶಾಲೆ ಬಿಟ್ಟ ಮಕ್ಕಳ ಜಾಡನ್ನು ಪತ್ತೆ ಹಚ್ಚಿ ದಾಖಲೆಗಳ ಸಮೇತ ಮಾಹಿತಿ ಕಲೆ ಹಾಕಿ ನಂತರ ಅವರನ್ನು ಮುಖ್ಯ ವಾಹಿನಿಗೆ ತಂದಾಗ ಮಾತ್ರ  ನಾವೆಲ್ಲರೂ ಶಾಲೆ ಬಿಟ್ಟ ಮಕ್ಕಳ ಸಂಖ್ಯೆ ಕಡಿಮೆ ಮಾಡಿದಂತಾಗುತ್ತದೆ...ಎಂದು ಮಾರ್ಮಿಕವಾಗಿ ನುಡಿದರು ಈ ಸಂದರ್ಭದಲ್ಲಿ  ಮಧ್ಯಾಹ್ನ ಉಪಹಾರ ಯೋಜನೆಯ ಸ.ನಿ.ರಾದ ಶ್ರೀ ಜಯಪ್ಪ ಚಾಪೆಲ್,RLFH ಸಂಸ್ಥೆಯ ಸದಸ್ಯರು ಮು.ಗು.ಗಳು  ಬಿ.ಆರ್.ಪಿ.ಸಿ.ಆರ್.ಪಿ.ರವರು ಹಾಗೂ ಸ.ಶಿ.ರವರು ಹಾಜರಿದ್ದರು.

Sunday, August 14, 2022

75 ನೇ ಸ್ವಾತ್ರಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಧ್ವಜಾರೋಹಣ


 75 ನೇ ಸ್ವಾತ್ರಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಧ್ವಜಾರೋಹಣವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಕ್ಷೇತ್ರ  ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಗಳ ಕಾರ್ಯಾಲಯದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿಗಳು ಧ್ವಜಾರೋಹಣ ಕಾರ್ಯಕ್ರಮದ ಸುಮಧುರ ಕ್ಷಣಗಳು.

Saturday, August 13, 2022

75 ನೇ ಸ್ವಾತಂತ್ರ್ಯ ಅಮೃತ ಮಹೊತ್ಸವ ಹಾಗೂ ಹರ ಘರ್ ತಿರಂಗಾ "ಪಥ ಸಂಚಲನ" ಕಾರ್ಯಕ್ರಮ



 

 

 


ಮಾನ್ಯ ಶಾಸಕರರಾದ ಶ್ರೀ ಅವಿನಾಶ ಜಾಧವ ಸರ್,ತಾಲೂಕಾ ದಂಡಾಧಿಕಾರಿಗಳಾದ ಮಾನ್ಯ ಶ್ರೀಮತಿ ಅಂಜುಮ್ ತಬ್ಸುಮ್ ಮೇಡಮ್,ಮಾನ್ಯ ಕ್ಷೇತ್ರ  ಶಿಕ್ಷಣಾಧಿಕಾರಿಗಳಾದ ಶ್ರೀ ರಾಚಪ್ಪ ಭದ್ರಶಟ್ಟಿ ಸರ್ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಮಾರುತಿ ಯಂಗನೂರ್ ಸರ್ ತಾಲೂಕಾ ದೈಹಿಕ ಶಿಕ್ಷಣಾಧಿಕಾರಿಗಳಾದ ಶ್ರೀ ನಾಗೇಂದರರಾವ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಚಾಲಕರಾದ ಶ್ರೀ ಎಸ್,ಪಿ, ಸುಳ್ಳದ ಸರ್ ತಾಲೂಕಿನ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು,ಪದಾಧಿಕಾರಿಗಳು,ಮು.ಗು.ವೃಂದ,ಸಹ-ಶಿಕ್ಷಕ ವೃಂದ,ವಿದ್ಯಾರ್ಥಿಗಳು,ಶಿಕ್ಷಣ ಇಲಾಖೆಯ ಅನುಷ್ಠಾನಾಧಿಕಾರಿಗಳು ಗ್ರಾಮಸ್ಥರೆಲ್ಲರ ಸಹಕಾರದಿಂದ ಇಂದು ದಿನಾಂಕ 13-08-2022 ರಂದು ಚಿಂಚೋಳಿ ತಾಲೂಕಿನಲ್ಲಿ ನಡೆದ 167 ಫೀಟ್ ಉದ್ದದ ರಾಷ್ಟ್ರ ಧ್ವಜದ "ಪಥ ಸಂಚಲನ" ಕಾರ್ಯಕ್ರಮವು  ಶ್ರೀ  ಹಾರಕೂಡ ದೇವಸ್ಥಾನ ಚಿಂಚೋಳಿಯಿಂದ ಶ್ರೀ ರಾಮಚಂದ್ರ ಪ್ರೌಢ ಶಾಲೆ ಚಿಂಚೋಳಿಯವರೆಗೆ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್,ಜಿಲ್ಲಾ ಆಡಳಿತ, ತಾಲೂಕಾ ಆಡಳಿತ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಚಿಂಚೋಳಿ ಇವರ ಸಹಯೋಗದಲ್ಲಿ ಅದ್ಧೂರಿಯಾಗಿ  ನಡೆದಿರುವ, ದೃಶ್ಯಗಳು.


 

Thursday, August 11, 2022

"ಜಿಲ್ಲಾ ಹಂತದ ರಸಪ್ರಶ್ನೆ ಸ್ಪರ್ಧೆಯಲ್ಲಿ ಚಿಂಚೋಳಿ ತಾಲೂಕಿನ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ "

 

ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕಲಬುರ್ಗಿ ಇವರು ಹಮ್ಮಿಕೊಂಡ ಜಿಲ್ಲಾ ಹಂತದ ರಸಪ್ರಶ್ನೆಯಲ್ಲಿ ಚಿಂಚೋಳಿ ತಾಲೂಕಿನ ಪ್ರಾಥಮಿಕ ಶಾಲಾ ಹಂತದ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿರುವ ಕು.ಲಕ್ಷ್ಮಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊರವಿ ಮತ್ತು ಕು. ರಾಧಿಕಾ ಸರ್ಕಾರಿ ಮಾದರಿಯ  ಪ್ರಾಥಮಿಕ ಶಾಲೆ ನಿಡಗುಂದಾ ವಿದ್ಯಾರ್ಥಿನಿಯರಿಗೆ ಕಲ್ಬುರ್ಗಿ ಜಿಲ್ಲಾಧಿಕಾರಿಗಳಾದ ಮಾನ್ಯ ಶ್ರೀ ಯಶವಂತ್ ಗುರಕರ್ ಸರ್ ಮತ್ತು ಮಾನ್ಯ ಆಯುಕ್ತ ರಾದ ಶ್ರೀಮತಿ ಗರಿಮಾ ಪಂವಾರ್ ಮೇಡಂ ಪ್ರಶಸ್ತಿ ವಿತರಿಸಿದರು ಈ ಸಂದರ್ಭದಲ್ಲಿ ಮಾನ್ಯ ಡಿಡಿಪಿಐ ಸರ್ ಶ್ರೀ ಸಕ್ರೆಪ್ಪ ಗೌಡ ಬಿರಾದರ್ ಸರ್ ವಿದ್ಯಾರ್ಥಿಗಳಿಗೆ ತುಂಬು ಹೃದಯದ ಧನ್ಯವಾದಗಳೊಂದಿಗೆ ಶುಭ ಹಾರೈಸಿದರು.

"ಜಂತು ಹುಳು ಮಾತ್ರೆ ವಿತರಣೆ"

 

ದಿನಾಂಕ 10-08-2022 ರಂದು ಪ.ಪೂ.ಕಾಲೇಜು ಹಾಗೂ ಕೆ.ಪಿ.ಎಸ್ ಶಾಲೆ ಚಂದಾಪೂರ ಇವರ ಸಂಯುಕ್ತ ಆಶ್ರಯದಲ್ಲಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಚಂದಾಪೂರ ಇವರ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಜಂತು ಹುಳು ನಿವಾರಣೆ ಮಾತ್ರೆಗಳನ್ನು ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ  ರಾಚಪ್ಪಾ ಭದ್ರಶಟ್ಟಿ,ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಶ್ರೀ ಜಯಪ್ಪ ಚಾಪೆಲ್  ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ವಿತರಿಸಿದರು. ಈ ಸಂದರ್ಭದಲ್ಲಿ ರಾ.ಸ.ನೌ.ಸಂಘದ ಅಧ್ಯಕ್ಷರಾದ ಶ್ರೀ ದೇವಿಂದ್ರಪ್ಪ ಹೋಳ್ಕರ್,ಪ್ರೌ.ಶಾಲಾ ಶಿ.ಸಂಘದ ಅಧ್ಯಕ್ಷರಾದ ಶ್ರೀ ಖುರ್ಶೀದ್ಮಿಯಾ ಹಾಗೂ ಪ.ಪೂ.ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಮಲ್ಲಿಕಾರ್ಜುನ ಪಾಲಮೂರ್,ದೈ.ಶಿಕ್ಷಕರಾದ ಶ್ರೀ  ಶಾಮರಾವ ಮೋಘಾ ಮತ್ತಿತರರು ಹಾಜರಿದ್ದರು

Wednesday, August 10, 2022

75 ನೇ ಸ್ವಾತಂತ್ರ್ಯ ದಿನಾಚರಣೆಯ "ಆಜಾದಿ ಕಾ ಅಮೃತ್ ಮಹೋತ್ಸವ" ಪಥಸಂಚಲನ ಕುರಿತು


 


75 ನೇ ಸ್ವಾತಂತ್ರ್ಯ ದಿನಾಚರಣೆಯ "ಆಜಾದಿ ಕಾ ಅಮೃತ್ ಮಹೋತ್ಸವ" ನಿಮಿತ್ತ ದಿನಾಂಕ 13-08-2022 ರಂದು  ಶ್ರೀ ಹಾರಕೂಡ ಚನ್ನಬಸವ ದೇವಸ್ಥಾನ ಚಿಂಚೋಳಿಯಿಂದ ಶ್ರೀ ರಾಮಚಂದ್ರ ಪ್ರೌಢ ಶಾಲೆಯವರೆಗೆ ಪಥಸಂಚಲನ ಕುರಿತು ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ದಿನಾಂಕ 10-08-2022 ರಂದು ಪ.ಪೂ.ಕಾಲೇಜು ಹಾಗೂ ಕೆ.ಪಿ.ಎಸ್.ಚಂದಾಪೂರ ಶಾಲೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

Friday, August 5, 2022

NEP-2020 COURSES


 Scan This image And Complete NEP-2020 Courses In time

"ನನ್ನ ದೇಶ ನನ್ನ ಹೆಮ್ಮೆ" ಚಿತ್ರಕಲಾ ಸ್ಪರ್ಧೆ


ಮಾನ್ಯ ಜಿಲ್ಲಾಧಿಕಾರಿಗಳು ಕಲಬುರ್ಗಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಉಲ್ಲೇಖಿತ ಪತ್ರದಲ್ಲಿನ ಆದೇಶದಂತೆ ಹಾಗೂ ಶಾಲಾ ಶಿಕ್ಷಣ ಮತ್ತು
ಸಾಕ್ಷರತೆ ಇಲಾಖೆ ಕಲಬುರ್ಗಿಯ ಮಾನ್ಯ ಉಪನಿರ್ದೇಶಕರ ಆದೇಶದಂತೆ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡ ತಾಲೂಕಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು...

ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಚಿಂಚೋಳಿ



Thursday, August 4, 2022

"ನನ್ನ ದೇಶ ನನ್ನ ಹೆಮ್ಮೆ" ರಸಪ್ರಶ್ನೆ ಕಾರ್ಯಕ್ರಮ

 


ಮಾನ್ಯ ಜಿಲ್ಲಾಧಿಕಾರಿಗಳು ಕಲಬುರ್ಗಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಉಲ್ಲೇಖಿತ ಪತ್ರದಲ್ಲಿನ ಆದೇಶದಂತೆ ಹಾಗೂ ಶಾಲಾ ಶಿಕ್ಷಣ ಮತ್ತು
ಸಾಕ್ಷರತೆ ಇಲಾಖೆ ಕಲಬುರ್ಗಿಯ ಮಾನ್ಯ ಉಪನಿರ್ದೇಶಕರ ಆದೇಶದಂತೆ  ಆದರ್ಶ ವಿದ್ಯಾಲಯ  ಪೋಲಕಪಳ್ಳಿಯಲ್ಲಿ ಹಮ್ಮಿಕೊಂಡ ತಾಲೂಕಾ ಮಟ್ಟದ ರಸಪ್ರಶ್ನೆ ಕಾರ್ಯಕ್ರಮವನ್ನು ತಾಲ್ಲೂಕಿನ ದಂಡಾಧಿಕಾರಿಗಳಾದ ಮಾನ್ಯ ಶ್ರೀಮತಿ ಅಂಜುಮ್ ತಬ್ಸುಮ್ ಇವರು ಸಸಿಗೆ ನೀರು ಉಣಿಸುವುದರ ಮೂಲಕ ಉದ್ಘಾಟಿಸಿದರು ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು,ಕ್ಷೇತ್ರ ಸಮನ್ವಯಾಧಿಕಾರಿಗಳು,ಡೈಟ್ ನ ಹಿರಿಯ ಉಪನ್ಯಾಸಕರು ಹಾಗೂ ತಾಲೂಕಿನ ನೋಡಲ್ ಅಧಿಕಾರಗಳು,ಆದರ್ಶವಿದ್ಯಾಲಯ ಶಾಲೆಯ ಮು.ಗು.ಗಳು,ಸಹ ಶಿಕ್ಷಕರು ಹಾಗೂ ಎಸ್.ಡಿ.ಎಮ್.ಸಿ.ಸದಸ್ಯರು ವಿವಿಧ ಶಾಲೆ ಮು.ಗು.ಗಳು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು......

ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಚಿಂಚೋಳಿ