Tuesday, September 6, 2022

"ಕೋಡ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ"

 

 ಇಂದು ದಿನಾಂಕ 6-9-22 ರಂದು ಕೋಡ್ಲಿ ಕ್ಲಸ್ಟರ್ ಮಟ್ಟದ "ಪ್ರತಿಭಾ ಕಾರಂಜಿಯಲ್ಲಿ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಭಾಗವಹಿಸಿ ಪ್ರತಿಯೊಬ್ಬರಲ್ಲೂ ಒಂದು ಕಲೆ ಇರುತ್ತೆ ಆ ಕಲೆ ಹೊರಹಾಕಲೂ ಈ ಶಾಲಾ ಕಾಲೇಜು ಗಳೇ ಸೂಕ್ತ ವೇದಿಕೆ ಆ ನಿಟ್ಟಿನಲ್ಲಿ ತಾವಲ್ಕಾ ಪ್ರಯತ್ನಿಸಿ ಉನ್ನತ ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.ಈ ಸಂದರ್ಭದಲ್ಲಿ ಗ್ರಾಮದ ಗಣ್ಯರು ಭಾಗವಹಿಸಿ ನಗದು ಬಹುಮಾನ ಮತ್ತು ಪ್ರಶಸ್ತಿ ಪ್ರಮಾಣ ಪತ್ರಗಳನ್ನು ವಿತರಿಸಿದರು. ಕ್ಲಸ್ಟರ್ ನ ಪ್ರಭಾರಿ ಸಿ.ಆರ್.ಪಿ.ಯವರಾದ ಶ್ರೀ ಶಿವಶರಣಪ್ಪಾ ಇವರು ಕಾರ್ಯಕ್ರಮ ತುಂಬಾ ವ್ಯವಸ್ಥಿತವಾಗಿ ಆಯೋಜಿಸಿದ್ದರು..ವಿವಿಧ ಶಾಲೆಯ ಮು.ಗು.ಗಳು, ವಿದ್ಯಾರ್ಥಿಗಳು,ಗ್ರಾಮದ ಶಿಕ್ಷಣ ಪ್ರೇಮಿಗಳು ಭಾಗವಹಿಸಿ ಕಾರ್ಯಕ್ರಮ  ಯಶಸ್ವಿಯಾಗಿ ಮುಕ್ತಾಯಗೊಳಿಸಿದರು....

Monday, September 5, 2022

"ತಾಲೂಕಾ ಮಟ್ಟದ ಶಿಕ್ಷಕರ ದಿನಾಚರಣೆ"


 ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಚಿಂಚೋಳಿ ಮತ್ತು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕಾ ಘಟಕ ಚಿಂಚೋಳಿ ಇವರ ಸಹಯೋಗದಲ್ಲಿ ತಾಲೂಕಾ ಮಟ್ಟದ  ಶಿಕ್ಷಕರ ದಿನಾಚಾರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾನ್ಯ ತಹಶೀಲ್ದಾರರಾದ ಶ್ರೀಮತಿ ಅಂಜುಮ್ ತಬ್ಸುಮ್ ಮೇಡಮ್ ರವರು ಜ್ಯೋತಿ ಬೆಳಗಿಸುವದರೊಂದಿಗೆ ಉದ್ಘಾಟಿಸಿದರು ಅಧ್ಯಕ್ಷತೆಯನ್ನು ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ವಹಿಸಿದರು,ಕ್ಷೇತ್ರ ಸಮನ್ವಯಾಧಿಕಾರಿಗಳಾದ ಮಾರುತಿ ಯಂಗನೂರರವರು ಸ್ವಾಗತ,ಶ್ರೀ  ಸುರೇಶ ಕೊರವಿ ಅಧ್ಯಕ್ಷರು ಪ್ರಾ.ಶಾ.ಶಿ.ಸಂಘ ಚಿಂಚೋಳಿ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು..ಮತ್ತು ಶ್ರೀ ಅಶೋಕ ಹೂವಿನಭಾವಿ ಶಿಕ್ಷಣ ಸಂಯೋಜಕರು ಇವರು "ವಿಶೇಷ ಉಪನ್ಯಾಸ" ನಂತರ ನಿವೃತ್ತ ಶಿಕ್ಷಕರ ಸನ್ಮಾನ ಹಾಗೂ 10 ನೇ ತರಗತಿಯಲ್ಲಿ ಪ್ರತಿಶತ ಫಲಿತಾಂಶ ಪಡೆದ ಶಾಲೆಯ ಮು.ಗು.ಗಳಿಗೂ ಹಾಗೂ ಎಲ್ಲಾ ವಿಷಯ ಶಿಕ್ಷಕರಿಗೂ ಸನ್ಮಾನಿಸಲಾಯಿತು  ಶ್ರೀ ನರಸಪ್ಪ ಖಜಾಂಚಿ ಪ್ರಾ.ಶಾ.ಶಿ.ಸಂಘ ಚಿಂಚೋಳಿ ಇವರು ನಿರೂಪಿಸಿದರು ಮತ್ತು ಚಿಂಚೋಳಿ ಕ್ಲಸ್ಟರ್ ನ ಸಿ.ಆರ್.ಪಿ.ರವರಾದ ಶ್ರೀಮತಿ ಮೀನಾಕ್ಷಿರವರು ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.

Saturday, September 3, 2022

ಬ್ಲಾಕ್ ಹಂತದ "ವಿಜ್ಞಾನ ವಿಚಾರ ಗೋಷ್ಠಿ" ಮತ್ತು "ವಿಜ್ಞಾನ ನಾಟಕ" ಸ್ಪರ್ಧೆ


 ಇಂದು ದಿನಾಂಕ 03-09-2022 ರಂದು ಕೆ.ಪಿ.ಎಸ್ ಪ್ರೌಢ ಶಾಲೆ ಚಂದಾಪೂರ ಇಲ್ಲಿ ಆಯೋಜಿಸಿರುವ ಬ್ಲಾಕ್ ಹಂತದ "ವಿಜ್ಞಾನ ನಾಟಕ" ಸ್ಪರ್ಧೆಯಲ್ಲಿ ಸ.ಉ.ಪ್ರೌಢ ಶಾಲೆ ಸುಲೆಪೇಟ್ ಪ್ರಥಮ,ಕೆ.ಪಿ.ಎಸ್.ದ್ವಿತೀಯ ಸ್ಥಾನ ಹಾಗೂ ವಿಶ್ವ ವಾಹಿನಿ ಪ್ರೌಢ ಶಾಲೆ ಐನಾಪೂರ ತೃತೀಯ ಸ್ಥಾನ ಪಡೆದಿರುತ್ತಾರೆ. ಮತ್ತು "ವಿಜ್ಞಾನ ವಿಚಾರಗೋಷ್ಟಿ"ಯಲ್ಲಿ ಸ.ಪ್ರೌಢ ಶಾಲೆ.ಐನೋಳಿ ಪ್ರಥಮ ಸ್ಥಾನ,ಕೆ.ಪಿ.ಎಸ್.ಚಂದಾಪೂರ ದ್ವಿತೀಯ ಸ್ಥಾನ ಹಾಗೂ ವಿಶ್ವ ವಾಹಿನಿ ಪ್ರೌಢ ಶಾಲೆ ಐನಾಪೂರ ತೃತೀಯ ಸ್ಥಾನ ಪಡೆದಿರುತ್ತಾರೆ.ಈ ಸಂದರ್ಭದಲ್ಲಿ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸುತ್ತಾ ಶುಭ ಕೋರಿ ಜಿಲ್ಲಾ ಹಂತದಲ್ಲಿಯೂ ಕೂಡ ಪ್ರಶಸ್ತಿ ಪಡೆಯಲಿ ಎಂದು ಶುಭ ಹಾರೈಸಿದರು ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿಗಳು ಅಕ್ಷರ ದಾಸೋಹ ಸಹಾಯಕ ನಿರ್ದೇಶಕರು. ಕೆ.ಪಿ.ಎಸ್.ಶಾಲೆಯ ಪ್ರಭಾರಿ ಮು.ಗು.ಗಳು,ವಿವಿಧ ಶಾಲೆಯ ಸಹ ಶಿಕ್ಷಕರುಗಳು ಮತ್ತು ತೀರ್ಪುಗಾರರು ಹಾಗೂ ತಾಲೂಕಾ ನೋಡಲ್ ಅಧಿಕಾರಿಗಳು ಭಾಗವಹಿಸಿದರು. ದೈಹಿಕ ಶಿಕ್ಷಕರಾದ ಶ್ರೀ ಶಾಮರಾವ ಮೋಘಾ ಸರ್ ರವರ ಕಾರ್ಯಕ್ರಮ ನಿರೂಪಣೆಯೊಂದಿಗೆ ಅಚ್ಚುಕಟ್ಟಾಗಿ ನಡೆಸಿಕೊಟ್ಟರು .