ದಿನಾಂಕ 30-09-2023 ರಂದು ಸರಕಾರಿ ಕನ್ಯಾ ಪ್ರೌಢ ಶಾಲೆ ಚಿಂಚೋಳಿ ಇಲ್ಲಿ ಗಣಿತ ಮತ್ತು ವಿಜ್ಞಾನ ಶಿಕ್ಷಕರಿಗಾಗಿ ಹಮ್ಮಿಕೊಂಡ ಸಮಾಲೋಚನೆ ಸಭೆಯಲ್ಲಿ ಮಾನ್ಯ ಕ್ಷೇತ್ರಶಿಕ್ಷಣಾಧಿಕಾರಿಗಳು ವಿಷಯ ಶಿಕ್ಷಕರ ವೇದಿಕೆಯಲ್ಲಿ"ಮೂರು ವರ್ಷದ ಮುನ್ನೋಟ" ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವುದರ ಮತ್ತು ಸರಳ ವಿಜ್ಞಾನ ಪ್ರಯೋಗದ ಮೂಲಕ ಉದ್ಘಾಟಿಸಿ ಈ ಕಾರ್ಯಾಗಾರಕ್ಕೆ 8 ,9.& 10 ನೇ ತರಗತಿಯಲ್ಲಿ A B & C ಗ್ರೇಡ್ ಪಡೆದ ಮಕ್ಕಳ ಪಟ್ಟಿಯೊಂದಿಗೆ ಹಾಜರಾದ ಶಿಕ್ಷಕರಿಗೆ ಮೂರು ವರ್ಷದಲ್ಲಿ ಗುಣಾತ್ಮಕ ಕಲಿಕೆಯೊಂದಿಗೆ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡುವಲ್ಲಿ ತಮ್ಮ ಪಾತ್ರ ಪ್ರಮುಖವಾದುದು ಎಂದು ಕಿವಿ ಮಾತು ಹೇಳಿದರು. ಮತ್ತು ಸ.ಸಭೆಯನ್ನು ಅಚ್ಚುಕಟ್ಟಾಗಿ ಆಯೋಜಿಸಿದ ಕನ್ಯಾ ಪ್ರೌಢ ಶಾಲೆಯ ಪ್ರ.ಮು.ಗು.ಗಳಾದ ಶ್ರೀ ಮೊಹ್ಮದ್ ಇದ್ರಿಷ್ ರವರು ಅಧ್ಯಕ್ಷತೆಯನ್ನು ವಹಿಸಿದ್ದರು ಮತ್ತು ಗಣಿತ,ವಿಜ್ಞಾನ ವಿಷಯದ ಮುಖ್ಯ ನೋಡಲ್ ಅಧಿಕಾರಿಗಳಾದ ಶ್ರೀ ಮನೋಹರ ಮು.ಗು.ಕನಕಪೂರ ಹಾಗೂ ಶ್ರೀ ನಿಂಗಪ ಮು.ಗು.ಕುಂಚಾವರಮ್ ರವರು ಮುಖ್ಯ ಅತಿಥಿಗಳಾಗಿ ಗುಣಾತ್ಮಕ ಶಿಕ್ಷಣದಲ್ಲಿ ತಮ್ಮ ಪಾತ್ರ ಪ್ರಮುಖವಾದುದು ಸಮ ಆಲೋಚನೆಯುಳ್ಳ ಸಮಾನ ಮನಸ್ಕರ ವೇದಿಕೆಯಲ್ಲಿ ಪಡೆದ ಜ್ಞಾನದ ಸದುಪಯೋಗವಾಗಲಿ ಎಂದು ಶುಭ ಹಾರೈಸಿದರು ಮತ್ತು ಸ.ಸಭೆಯ ನೋಡಲ್ ಅಧಿಕಾರಿಗಳಾದ ರಾಜಶೇಖರ ಬಿ.ಆರ್.ಪಿ.ಇವರು C grade ಪಡೆದ ಮಕ್ಕಳಿಗೆ ಸ್ಫೂರ್ತಿ ತುಂಬಿ ಅವರನ್ನು B And A ಗ್ರೇಡ್ ಗೆ ಯಾವ ರೀತಿ ತರಬೇಕೆಂದು ಚಟುವಟಿಕೆಯ ಮೂಲಕ ತಿಳಿಸಿದರು.ಗಣಿತ ಹಾಗೂ ವಿಜ್ಞಾನ ವಿಷಯದ ಸ.ನೋಡಲ್ ಅಧಿಕಾರಿಗಳು ಹಾಗೂ ವಿಷಯ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿ ಕಾರ್ಯಾಗಾರವನ್ನು ಅರ್ಥಪೂರ್ಣ ಹಾಗೂ ಅವಿಸ್ಮರಣೀಯವಾಗಿಸಿದರು.....
No comments:
Post a Comment