Friday, February 9, 2024

"ಸಂವಿಧಾನ ಜಾಗೃತಿ ಜಾಥಾ"


           ಭಾರತದ ಭಾಗ್ಯವಿಧಾತ , ಸಂವಿಧಾನದ ಶಿಲ್ಪಿ , ಸಂವಿಧಾನದ ಪಿತಾಮಹ , ದೀನದಲಿತರ ನಾಯಕ , ಆಗಿರುವಂತಹ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನವನ್ನು ರಚನೆ ಮಾಡಿ ಭಾರತಕ್ಕೆ ಸಮರ್ಪಣೆ ಮಾಡಿ 75 ವರ್ಷಗಳು ಗತಿಸಿದ ಸವಿನೆನಪಿಗಾಗಿ  ಇಂದು ದಿನಾಂಕ 09/02/2024 ರಂದು "ಸಂವಿಧಾನ ಜಾಗೃತಿ ಜಾಥಾ" ರಥವು ಹೊಡೆಬೀರನಳ್ಳಿ ಗ್ರಾಮಕ್ಕೆ ಆಗಮಿಸಿದ ಸಂದರ್ಭದಲ್ಲಿ  ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಎಲ್ಲ ಶಾಲೆಗಳ ಶಿಕ್ಷಕರು , ವಿದ್ಯಾರ್ಥಿಗಳು , ಎಲ್ಲ ಸಂಘ - ಸಂಸ್ಥೆಗಳ  ಮುಖಂಡರು , ಕಾರ್ಯಕರ್ತರು ಹಾಗೂ ಹೊಡೆಬಿರನಳ್ಳಿ ಗ್ರಾಮದ ಎಲ್ಲ ಪಾಲಕ ಪೋಷಕರು , SDMC ಸರ್ವ ಪದಾಧಿಕಾರಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು ಸಂವಿಧಾನ ಜಾಗೃತಿ ಉಪನ್ಯಾಸವನ್ನು ಶ್ರೀ ರೇವಣಸಿದ್ದಪ್ಪ ದಂಡಿನ ಸ.ಶಿ.ಸ.ಪ್ರೌಢ ಶಾಲೆ ಗರಗಪಳ್ಳಿ ಶಿಕ್ಷಕರು ನೀಡಿದರು.ಮತ್ತು ಈ ಕಾರ್ಯಕ್ರಮದ ಉಸ್ತುವಾರಿ ಸ.ಹಿ.ಪ್ರಾ.ಶಾಲೆ ಗಣಾಪೂರ ಶಾಲೆ (RMSA) ಯ ದೈಹಿಕ ಶಿಕ್ಷಕರು ವಹಿಸಿಕೊಂಡಿದ್ದರು.

 

Thursday, February 8, 2024

*ಮಕ್ಕಳ ಕಲಿಕಾ ಮೇಳ*



         ದಿನಾಂಕ 08-02-2024 ಶಾದಿಪೂರ ವಲಯದಲ್ಲಿ *ಶಾಲಾ ಶಿಕ್ಷಣ ಇಲಾಖೆ ಚಿಂಚೋಳಿ ಹಾಗೂ ಅಜೀಂ ಪ್ರೇಮಜಿ ಪೌಂಡೇಶನ್ ನ ಸಹಯೋಗದಲ್ಲಿ* ಸ. ಹಿ. ಪ್ರಾ. ಶಾಲೆ ಚಿಕ್ಕಲಿಂಗದಳ್ಳಿ ಶಾಲೆಯಲ್ಲಿ *ಮಕ್ಕಳ ಕಲಿಕಾ ಮೇಳ*  ಹಮ್ಮಿಕೊಂಡಿದ್ದು, ಈ ಮೇಳದಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಿದ ಇಲಾಖೆಯ ಮೇಲಾಧಿಕಾರಿಗಳು,ಸಿ. ಆರ್. ಪಿ. ಅಧಿಕಾರಿಗಳು ಭಾಗವಹಿಸಿ ಇಂತಹ ಮೇಳಗಳು ಮಕ್ಕಳ ಕಲಿಕೆ ಉತ್ತಮ ಪಡಿಸುವುದರೊಂದಿಗೆ ಅವರಲ್ಲಿನ ಸೃಜನ ಶೀಲತೆ ವಿಮರ್ಶಾತ್ಮಕ ಚಿಂತನೆಗೆ ಅವಕಾಶ ಮಡಿಕೊಡುತ್ತವೆ ಎಂದು ತಿಳಿಸಿದರು.


Tuesday, February 6, 2024

ದಕ್ಷಿಣ ಭಾರತದ ವಿಜ್ಞಾನ ವಸ್ತು ಪ್ರದರ್ಶನ




 ಸ.ಪ್ರೌಢ ಶಾಲೆ ಐನೋಳಿ ಶಾಲೆಯ ಕುಮಾರ ರೆಹಾನ್ ಖಾನ ದಕ್ಷಿಣ ಭಾರತದ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಕರ್ನಾಟಕದಿಂದ ಪ್ರತಿನಿಧಿಸಿ ಪ್ರಥಮ ಸ್ಥಾನ ಪಡೆದು ಶಾಲೆಗೆ ಗ್ರಾಮಕ್ಕೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿರುವುದು ಸಂತಸ ಮೂಡಿಸಿದೆ....ಆ ಶಾಲೆಯ ಕ್ರಿಯಾಶೀಲ ವಿಜ್ಞಾನ ಶಿಕ್ಷಕರಿಗೂ ಹಾಗೂ ಮುಖ್ಯ ಗುರುಗಳಿಗೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಹೃತ್ಪೂರ್ವಕ  ಅಭಿನಂದನೆಗಳು.....
ಮಾನ್ಯ ಆಯುಕ್ತರು ಕಲಬುರ್ಗಿ ವಿಭಾಗ ಕಲಬುರ್ಗಿ, ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಆಡಳಿತ ಹಾಗೂ ಅಭಿವೃದ್ಧಿ ಡಿ.ವೈ.ಪಿ.ಸಿ.ಎಸ್.ಎಸ್.ಎ.ಮತ್ತು  ಆರ್.ಎಮ್.ಎಸ್.ಎ.ರವರು  ಜಿಲ್ಲಾ ಚಟುವಟಿಕೆಳ ನೋಡಲ್ ಅಧಿಕಾರಿಗಳು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ಷೇತ್ರ ಸಮನ್ವಯಾಧಿಕಾರಿಗಳು  ಹಾಗೂ ತಾಲೂಕಾ ವಿಜ್ಞಾನ ಚಟುವಟಿಕೆಗಳ ನೋಡಲ್ ಅಧಿಕಾರಿಗಳು ಯುವ ವಿಜ್ಞಾನಿಯ ಈ ಸಾಧನೆಗೆ ಹರ್ಷ ವ್ಯಕ್ತ ಪಡಿಸಿದ್ದಾರೆ......

   

 ಟ್ರೋಫಿ ಮತ್ತು ಪ್ರಮಾಣ ಪತ್ರ

 



Sunday, December 31, 2023

ರಾಜ್ಯ ಹಂತದ ವಿಜ್ಞಾನ ವಸ್ತುಪ್ರದರ್ಶನ


 
ದೊಡ್ಡ ಬಳ್ಳಾಫೂರದ ಜವಾಹರ್ ನವೋದಯ ವಿದ್ಯಾಲಯದಲ್ಲಿ  ದಿ.27.12.2023 ರ ಬುಧವಾರದಂದು ನಡೆದ  ರಾಜ್ಯ ಮಟ್ಟದ "ವಿಜ್ಞಾನ ವಸ್ತುಪ್ರದರ್ಶನ "ದಲ್ಲಿ ದಿವಂಗತ  ಶಶಿಧರ ನಾಗಶಟ್ಟಿ ಪುಣ್ಯಶಟ್ಟಿ ಸರಕಾರಿ ಪ್ರೌಢ ಶಾಲೆ ಐನೋಳಿ ಶಾಲೆಯ 10 ನೇ ತರಗತಿ ವಿದ್ಯಾರ್ಥಿ ಕು. ರಿಹಾನ್ ಖಾನ್ ಇವನು ZONAL ವಿಬವಾಗದ ಅಂತಿಮ 15 ಪ್ರಶಸ್ತಿಯಲ್ಲಿ  ಸ್ಥಾನ ಪಡೆದು ರಾಷ್ಟ್ರ  ಹಂತಕ್ಕೆ ಆಯ್ಕೆಯಾಗಿರುವ  ಕಾರಣ ಮಾರ್ಗದರ್ಶನ ಮಾಡಿದ ವಿಜ್ಞಾನ ಶಿಕ್ಷಕರಿಗೂ,ಸರ್ವಸಿಬ್ಬಂಧಿ ವರ್ಗ ಮತ್ತು ಕು.ರಿಹಾನ್ ಖಾನ್  ಇವರಿಗೆ ಶಾಲಾ ಶಿಕ್ಷಣ ಇಲಾಖೆ ಚಿಂಚೋಳಿ ವತಿಯಿಂದ ತುಂಬು ಹೃದಯದ ಅಭಿನಂದನೆಗಳು.




 


 

ಜಿಲ್ಲಾ ವಿಜ್ಞಾನ ವಸ್ತು ಪ್ರದರ್ಶನ

ಕಲಬುರಗಿ ಯ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ದಿ.17.11.2023 ರ ಶುಕ್ರವಾರದಂದು ನಡೆದ ಕಲಬುರಗಿ ಜಿಲ್ಲಾ ಮಟ್ಟದ "ವಿಜ್ಞಾನ ವಸ್ತುಪ್ರದರ್ಶನ "ದಲ್ಲಿ ದಿವಂಗತ  ಶಶಿಧರ ನಾಗಶಟ್ಟಿ ಪುಣ್ಯಶಟ್ಟಿ ಸರಕಾರಿ ಪ್ರೌಢ ಶಾಲೆ ಐನೋಳಿ ಶಾಲೆಯ 10 ನೇ ತರಗತಿ ವಿದ್ಯಾರ್ಥಿ ಕು. ರಿಹಾನ್ ಖಾನ್ ಇವನು ಪ್ರಥಮ ಸ್ಥಾನ ಪಡೆದು ರಾಜ್ಯ ಹಂತಕ್ಕೆ ಆಯ್ಕೆಯಾಗಿರುವ  ಕಾರಣ ಮಾರ್ಗದರ್ಶನ ಮಾಡಿದ ವಿಜ್ಞಾನ ಶಿಕ್ಷಕರಿಗೂ,ಸರ್ವಸಿಬ್ಬಂಧಿ ವರ್ಗ ಮತ್ತು ಕು.ರಿಹಾನ್ ಖಾನ್  ಇವರಿಗೆ ಶಾಲಾ ಶಿಕ್ಷಣ ಇಲಾಖೆ ಚಿಂಚೋಳಿ ವತಿಯಿಂದ ತುಂಬು ಹೃದಯದ ಅಭಿನಂದನೆಗಳು.


 

 

Friday, October 6, 2023

ವಿಷಯ ಶಿಕ್ಷಕರ ವೇದಿಕೆ (ಹಿಂದಿ ಮತ್ತ ಸಮಾಜ ವಿಜ್ಞಾನ ಶಿಕ್ಷಕರಿಗಾಗಿ)

 

ದಿನಾಂಕ 06-10-2023 ರಂದು ಆದರ್ಶವಿದ್ಯಾಲಯ ಪೋಲಕಪಳ್ಳಿ.ಶಾಲೆಯಲ್ಲಿ ಇಲ್ಲಿ ಸಮಾಜ ವಿಜ್ಞಾನ ಶಿಕ್ಷಕರಿಗಾಗಿ ಹಮ್ಮಿಕೊಂಡ  ಸಮಾಲೋಚನೆ ಸಭೆಯಲ್ಲಿ ಮಾನ್ಯ ಕ್ಷೇತ್ರಶಿಕ್ಷಣಾಧಿಕಾರಿಗಳು ವಿಷಯ ಶಿಕ್ಷಕರ ವೇದಿಕೆಯಲ್ಲಿ"ಮೂರು ವರ್ಷದ ಮುನ್ನೋಟ" ಕಾರ್ಯಕ್ರಮವನ್ನು ಸಸಿಗೆ ನೀರು ಎರೆಯುದರ ಮೂಲಕ ಉದ್ಘಾಟಿಸಿ ಈ ಕಾರ್ಯಾಗಾರಕ್ಕೆ 8 ,9.& 10 ನೇ ತರಗತಿಯಲ್ಲಿ A B  & C ಗ್ರೇಡ್ ಪಡೆದ ಮಕ್ಕಳ ಪಟ್ಟಿಯೊಂದಿಗೆ ಹಾಜರಾದ ಶಿಕ್ಷಕರಿಗೆ ಮೂರು ವರ್ಷದಲ್ಲಿ ಗುಣಾತ್ಮಕ ಕಲಿಕೆಯೊಂದಿಗೆ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡುವಲ್ಲಿ ತಮ್ಮ ಪಾತ್ರ ಪ್ರಮುಖವಾದುದು ಎಂದು ಕಿವಿ ಮಾತು ಹೇಳಿದರು. ಮತ್ತು ಸ.ಸಭೆಯನ್ನು ಅಚ್ಚುಕಟ್ಟಾಗಿ ಆಯೋಜಿಸಿದ ಆದರ್ಶ ವಿದ್ಯಾಲಯ ಶಾಲೆಯ ಪ್ರ.ಮು.ಗು.ಗಳಾದ ಶ್ರೀ ನಾಗಶಟ್ಥಿ ಭದ್ರಶಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು ಮತ್ತು ಸ.ವಿಜ್ಞಾನ  ವಿಷಯದ ಮುಖ್ಯ ನೋಡಲ್ ಅಧಿಕಾರಿಗಳಾದ ಶ್ರೀ ನಂದಕುಮಾರ ಮು.ಗು.ಗರಗಪಳ್ಳಿ ಹಾಗೂ ಹಿಂದಿ ವಿಷಯದ ನೋ.ಅ.ಗಳಾದ ಶ್ರೀ ಶಂಕರನಾಯಕರವರು ಮುಖ್ಯ ಅತಿಥಿಗಳಾಗಿ ಗುಣಾತ್ಮಕ ಶಿಕ್ಷಣದಲ್ಲಿ ತಮ್ಮ ಪಾತ್ರ ಪ್ರಮುಖವಾದುದು ಸಮ ಆಲೋಚನೆಯುಳ್ಳ ಸಮಾನ ಮನಸ್ಕರ ವೇದಿಕೆಯಲ್ಲಿ ಪಡೆದ ಜ್ಞಾನದ ಸದುಪಯೋಗವಾಗಲಿ ಎಂದು ಶುಭ ಹಾರೈಸಿದರು.ಇದೇ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷರಾದ ಶ್ರೀ ಮಾರುತಿ ಪತಂಗೆ ಸರ್,ಪ್ರೌಢ ಶಾಲಾ ಸ.ಶಿ.ಸಂಘದ ಅಧ್ಯಕ್ಷರಾದ ಶ್ರೀ ಖುರ್ಷೀದ ಅಲಿ ಸರ್  ಗುಣಾತ್ಮಕ ಕಲಿಕೆಗೆ ಒತ್ತು ನೀಡಿ ಬ್ಲಾಕ್ ನ ಫಲಿತಾಂಶ ಹೆಚ್ಚಳಕ್ಕೆ ಪ್ರಯತ್ನಿಸಲು ಸಲಹೆ ನೀಡಿದರು ರ ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಸವಂತರೆಡ್ಡಿ ಹಾಗೂ ಶ್ರೀ ಮಲ್ಲಿನಾಥ ಸರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು....