Saturday, September 30, 2023

ಸಮಾಲೋಚನೆ ಸಭೆ (ಗಣಿತ ಮತ್ತು ವಿಜ್ಞಾನ ಶಿಕ್ಷಕರಿಗಾಗಿ)

ದಿನಾಂಕ 30-09-2023 ರಂದು   ಸರಕಾರಿ ಕನ್ಯಾ ಪ್ರೌಢ ಶಾಲೆ ಚಿಂಚೋಳಿ ಇಲ್ಲಿ ಗಣಿತ ಮತ್ತು ವಿಜ್ಞಾನ ಶಿಕ್ಷಕರಿಗಾಗಿ ಹಮ್ಮಿಕೊಂಡ  ಸಮಾಲೋಚನೆ ಸಭೆಯಲ್ಲಿ ಮಾನ್ಯ ಕ್ಷೇತ್ರಶಿಕ್ಷಣಾಧಿಕಾರಿಗಳು ವಿಷಯ ಶಿಕ್ಷಕರ ವೇದಿಕೆಯಲ್ಲಿ"ಮೂರು ವರ್ಷದ ಮುನ್ನೋಟ" ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವುದರ  ಮತ್ತು ಸರಳ ವಿಜ್ಞಾನ ಪ್ರಯೋಗದ ಮೂಲಕ ಉದ್ಘಾಟಿಸಿ ಈ ಕಾರ್ಯಾಗಾರಕ್ಕೆ 8 ,9.& 10 ನೇ ತರಗತಿಯಲ್ಲಿ A B  & C ಗ್ರೇಡ್ ಪಡೆದ ಮಕ್ಕಳ ಪಟ್ಟಿಯೊಂದಿಗೆ ಹಾಜರಾದ ಶಿಕ್ಷಕರಿಗೆ ಮೂರು ವರ್ಷದಲ್ಲಿ ಗುಣಾತ್ಮಕ ಕಲಿಕೆಯೊಂದಿಗೆ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡುವಲ್ಲಿ ತಮ್ಮ ಪಾತ್ರ ಪ್ರಮುಖವಾದುದು ಎಂದು ಕಿವಿ ಮಾತು ಹೇಳಿದರು. ಮತ್ತು ಸ.ಸಭೆಯನ್ನು ಅಚ್ಚುಕಟ್ಟಾಗಿ ಆಯೋಜಿಸಿದ ಕನ್ಯಾ ಪ್ರೌಢ ಶಾಲೆಯ ಪ್ರ.ಮು.ಗು.ಗಳಾದ ಶ್ರೀ ಮೊಹ್ಮದ್ ಇದ್ರಿಷ್ ರವರು ಅಧ್ಯಕ್ಷತೆಯನ್ನು ವಹಿಸಿದ್ದರು ಮತ್ತು ಗಣಿತ,ವಿಜ್ಞಾನ  ವಿಷಯದ ಮುಖ್ಯ ನೋಡಲ್ ಅಧಿಕಾರಿಗಳಾದ ಶ್ರೀ ಮನೋಹರ ಮು.ಗು.ಕನಕಪೂರ ಹಾಗೂ ಶ್ರೀ ನಿಂಗಪ ಮು.ಗು.ಕುಂಚಾವರಮ್ ರವರು ಮುಖ್ಯ ಅತಿಥಿಗಳಾಗಿ ಗುಣಾತ್ಮಕ ಶಿಕ್ಷಣದಲ್ಲಿ ತಮ್ಮ ಪಾತ್ರ ಪ್ರಮುಖವಾದುದು ಸಮ ಆಲೋಚನೆಯುಳ್ಳ ಸಮಾನ ಮನಸ್ಕರ ವೇದಿಕೆಯಲ್ಲಿ ಪಡೆದ ಜ್ಞಾನದ ಸದುಪಯೋಗವಾಗಲಿ ಎಂದು ಶುಭ ಹಾರೈಸಿದರು ಮತ್ತು ಸ.ಸಭೆಯ ನೋಡಲ್ ಅಧಿಕಾರಿಗಳಾದ ರಾಜಶೇಖರ ಬಿ.ಆರ್.ಪಿ.ಇವರು  C grade ಪಡೆದ ಮಕ್ಕಳಿಗೆ ಸ್ಫೂರ್ತಿ ತುಂಬಿ ಅವರನ್ನು B And A ಗ್ರೇಡ್ ಗೆ ಯಾವ ರೀತಿ ತರಬೇಕೆಂದು ಚಟುವಟಿಕೆಯ ಮೂಲಕ ತಿಳಿಸಿದರು.ಗಣಿತ ಹಾಗೂ ವಿಜ್ಞಾನ  ವಿಷಯದ ಸ.ನೋಡಲ್ ಅಧಿಕಾರಿಗಳು ಹಾಗೂ ವಿಷಯ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿ ಕಾರ್ಯಾಗಾರವನ್ನು ಅರ್ಥಪೂರ್ಣ ಹಾಗೂ   ಅವಿಸ್ಮರಣೀಯವಾಗಿಸಿದರು.....

 

Monday, September 25, 2023

"ಸಮರ್ಥ ಕಾರ್ಯಾಗಾರ"ಸೆಪ್ಟೆಂಬರ್-2023


ದಿನಾಂಕ 20-09-2023 ರಂದು ಸೆಪ್ಟೆಂಬರ್ ತಿಂಗಳ ಕಲಿಕಾವಲಯಲ್ಲಿ "ವಿದ್ಯಾರ್ಥಿಗಳ ಸಂಘ" ದ ಕುರಿತು ಪಿ.ಪಿ.ಟಿ.ಶೇರ್ಕು ಮಾಡುವುದರ ಮೂಲಕ ಕ್ಷೇತ್ರ ಸಂಪನ್ಮೂಲ  ವ್ಯಕ್ತಿ (ಪ್ರೌಢ-ವಿಜ್ಞಾನ) ಕ್ಷೇತ್ರ ಸಂಪನ್ಮೂಲ ಕೇಂದ್ರ ಚಿಂಚೋಳಿ ಇವರು ಪ್ರಸ್ತುತ ಪಡಿಸಿದರು ನಂತರ  RTI K2 ಹಾಗೂ ಕೆ.ಎಫ್.ಸಿ.ಮತ್ತು ಕೆ.ಟಿ.ಟಿ.ಪಿ.ಕುರಿತು ಸಂಪನ್ಮೂಲ ಶಿಕ್ಷಕರಾರದ ಶ್ರೀ ಕಿಶನ್ ಕುಲಕರ್ಣಿ ರವರು ತುಂಬಾ ವಿವರವಾದ ಮಾಹಿತಿ ನೀಡಿದರು...ಈ ಸಂದರ್ಭದಲ್ಲಿ ಡೈಟ್ಗೂ ನ ಹಿರಿಯ ಉಪನ್ಯಾಸಕರ ವೃಂದ ಗೂಗಲ್  ಮೀಟ್ ಮೂಲಕ ಶ್ರೀಮತಿ ವಿಜಯಲಕ್ಷ್ಮಿ ಕಟಕೆ,ಶ್ರೀ  ಮಲ್ಲಪ್ಪ ಸರ್ ಶ್ರೀ ಶಶಿಧರ ಸರ್ ಹಾಗೂ ಶ್ರೀ ನಿಂಗಣ್ಣ ಸಿಂಪಿ ಸರ್ ಯಶಸ್ವಿ ನಾಯಕತ್ವಕ್ಕೆ ಅವಶ್ಯಕ ಅಂಶಗಳ ಕುರಿತು ತಿಳಿಸಿದರು ಹಾಗೂ  ಡೈಟ್ ಕಮಲಾಪೂರನ ಉಪನ್ಯಾಸಕರು ಹಾಗೂ ತಾಲೂಕಾ ನೋಡಲ್ ಅಧಿಕಾರಿಗಳಾದ ಶ್ರೀ ಮೊಹ್ಮದ್ ಯೂಸುಫ್ ಪಟೇಲ್ ಸರ್ ಭಾಗವಹಿಸಿ ತರಬೇತಿಯ ಸಂಪೂರ್ಣ ಪಾಲ್ಗೊಂಡು ಇದರ ಸದುಪಯೋಗ ಪಡೆದುಕೊಳ್ಳಲು ಸಲಹೆ ನೀಡಿದರು....

 

"ವಿಜ್ಞಾನ ವಿಚಾರ ಗೋಷ್ಠಿ"


 

ಕಲಬುರಗಿ ಯ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ದಿ.21.09.2023 ರ ಗುರುವಾರದಂದು ನಡೆದ ಕಲಬುರಗಿ ಜಿಲ್ಲಾ ಮಟ್ಟದ "ವಿಜ್ಞಾನ ವಿಚಾರ ಗೋಷ್ಠಿ"ಯಲ್ಲಿ ಸರಕಾರಿ ಪ್ರೌಢ ಶಾಲೆ ಗಡಿಕೇಶ್ವರ ಶಾಲೆಯ 10 ನೇ ತರಗತಿ ವಿದ್ಯಾರ್ಥಿನಿ ಕು. ರಾಧಿಕಾ. ಮಂಗಳಮೂರ್ತಿ, ಇವರು ತೃತೀಯ ಸ್ಥಾನ ಪಡೆದ ಕಾರಣ ಮಾರ್ಗದರ್ಶನ ಮಾಡಿದ ಅತಿಥಿ ವಿಜ್ಞಾನ ಶಿಕ್ಷಕಿ, ಸರ್ವಸಿಬ್ಬಂಧಿ ವರ್ಗ ಮತ್ತು ಕು. ರಾಧಿಕಾ. ಮಂಗಳಮೂರ್ತಿ ಇವರಿಗೆ ತುಂಬು ಹೃದಯದ ಅಭಿನಂದನೆಗಳು.- ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವಸದಸ್ಯರು SDMC ಮತ್ತು ಮುಖ್ಯಶಿಕ್ಷಕರು ಸರಕಾರಿ ಪ್ರೌಢ ಶಾಲೆ ಗಡಿಕೇಶ್ವರ್, ತಾ. ಚಿಂಚೋಳಿ, ಜಿ. ಕಲಬುರಗಿ.

ಶಾಲಾ ಶಿಕ್ಷಣ ಇಲಾಖೆ ಚಿಂಚೋಳಿ ವತಿಯಿಂದ ಕೂಡ ಹೃತ್ಪೂರ್ವಕ ಅಭಿನಂದನೆಗಳು.

ರಾಷ್ಟೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

 ದಿನಾಂಕ:-23-09-2023 ರಂದು, ರಾಷ್ಟೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ ಹಾಗೂ BGVS ತಾಲೂಕು ಸಮಿತಿ ರಚನೆ, ಸಮಾರಂಭಕ್ಕೆ ಆಗಮಿಸಿ ಯಶಸ್ವಿಗೊಳಿಸಿದ, ಮಾನ್ಯ ಶ್ರೀ ಶಿವಶರಣಪ್ಪ ಮೂಳೆಗಾಂವ ಉಪನಿರ್ದೇಶಕರು ಪ.ಪೂ.ಕಾಲೇಜು, ಮಾನ್ಯ ಶ್ರೀ ನಾಗೇಂದ್ರಪ್ಪ ಅವರಾದ ಹಿಂದಿ ವಿಷಯ ಪರಿವೀಕ್ಷಕರು ಆಯುಕ್ತರ ಕಾರ್ಯಾಲಯ ಕಲಬುರ್ಗಿ ಹಾಗೂ ಜಿಲ್ಲಾ ಪದಾಧಿಕಾರಿಗಳು ಹಾಗೂ ತಾಲೂಕಿನ ಎಲ್ಲ ಶಿಕ್ಷಕ ಬಾಂಧವರಿಗೂ ವಿಶೇಷವಾಗಿ. ಕಾರ್ಯಾಕ್ರಮ ಆಯೋಜಿಸಲು ಸೂಕ್ತ ಸ್ಥಳಾವಕಾಶ ಮಾಡಿಕೊಡುವುದರೊಂದಿಗೆ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡಿದ ಸ.ಪ.ಪೂ.ಕಾ.ಪ್ರಾಂಶುಪಾಲರು ಹಾಗೂ BGVS ತಾಲೂಕು ಸಮಿತಿಯ ಗೌರವ ಅಧ್ಯಕ್ಷರು ಆದ ಪ್ರೊ. ಮಲ್ಲಿಕಾರ್ಜುನ ಪಾಲಾಮೂರ್ sir ರವರಿಗೆ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭಾಗವಹಿಸಿದ ಎಲ್ಲರಿಗೂ ತಾಲೂಕಾ ಸಮಿತಿವತಿಯಿಂದ ಹೃತ್ಪೂರ್ವಕ ವಂದನೆಗಳು.



ವಿಷಯ ಶಿಕ್ಷಕರ ವೇದಿಕೆ (ಪ್ರೌಢ ಶಾಲಾ ಶಿಕ್ಷಕರಿಗಾಗಿ ಕನ್ನಡ ಮತ್ತು ಇಂಗ್ಲೀಷ್)


ದಿನಾಂಕ:- 23-09-2023 ರಂದು   ಸರಕಾರಿ ಕನ್ಯಾ ಪ್ರೌಢ ಶಾಲೆ ಸುಲೆಪೇಟ್ ಇಲ್ಲಿ  ಕನ್ನಡ ಮತ್ತು ಇಂಗ್ಲೀಷ್ ಬೋಧಿಸುವ ಶಿಕ್ಷಕರಿಗಾಗಿ ಹಮ್ಮಿಕೊಂಡ  ಸಮಾಲೋಚನೆ ಸಭೆಯಲ್ಲಿ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕನಸಿನ ಕೂಸಾದ "ಮೂರು ವರ್ಷದ ಮುನ್ನೋಟ" ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಈ ಕಾರ್ಯಾಗಾರಕ್ಕೆ 8 ,9.& 10 ನೇ ತರಗತಿಯಲ್ಲಿ A B  & C ಗ್ರೇಡ್ ಪಡೆದ ಮಕ್ಕಳ ಪಟ್ಟಿಯೊಂದಿಗೆ ಹಾಜರಾದ ಶಿಕ್ಷಕರಿಗೆ ಮೂರು ವರ್ಷದಲ್ಲಿ ಗುಣಾತ್ಮಕ ಕಲಿಕೆಯೊಂದಿಗೆ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡುವಲ್ಲಿ ತಮ್ಮ ಪಾತ್ರ ಪ್ರಮುಖವಾದುದು ಎಂದು ಕಿವಿ ಮಾತು ಹೇಳಿದರು. ಮತ್ತು ಸ.ಸಭೆಯನ್ನು ಸೂಕ್ತವಾಗಿ ಮತ್ತು ಅಚ್ಚುಕಟ್ಟಾಗಿ ಆಯೋಜಿಸುವ  ವ್ಯವಸ್ಥೆಯನ್ನು ಮಾಡಿದ ಇಂಗ್ಲೀಷ್ ವಿಷಯದ ಮುಖ್ಯ ನೋಡಲ್ ಅಧಿಕಾರಿಗಳಾದ "ಶ್ರೀ ಸುರೇಶ ವಾಲಿಕಾರ್" ರವರು ಅಧ್ಯಕ್ಷತೆಯನ್ನು ವಹಿಸಿದ್ದರು ಮತ್ತು ಇನ್ನೋರ್ವ ಕನ್ನಡ ವಿಷಯದ ಮುಖ್ಯ ನೋಡಲ್ ಅಧಿಕಾರಿಗಳಾದ     "ಶ್ರೀ ಬಸವರಾಜ ಮೇಟಿ" ರವರು ಮುಖ್ಯ ಅತಿಥಿಗಳಾಗಿ ಹಾಗೂ ಇದೇ ಸಂದರ್ಭದಲ್ಲಿ ಮಕ್ಕಳಿಗೆ,ಸಿಬ್ಬಂದಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಸ್ ವ್ಯವಸ್ಥೆ ಕಲ್ಪಿಸಲು ಸಲಹೆಗಳನ್ನು ಸ್ವೀಕರಿಸಲು ಸಾರಿಗೆ ಇಲಾಖೆಯ ಅಧಿಕಾರಿಗಳು ಭಾಗವಹಿಸಿ ಅಹವಾಲುಗಳನ್ನು ಸ್ವೀಕರಿಸಿದರು.ಮತ್ತು ಕನ್ನಡ ಹಾಗೂ ಇಂಗ್ಲೀಷ್ ವಿಷಯದ ಸ.ನೋಡಲ್ ಅಧಿಕಾರಿಗಳು ಹಾಗೂ ವಿಷಯ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿ ಕಾರ್ಯಾಗಾರವನ್ನು ಅರ್ಥಪೂರ್ಣ ಹಾಗೂ ಅವಿಸ್ಮರಣೀಯವಾಗಿ ಮಾಡಿದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು.💐💐

ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರ "ಜನತಾ ದರ್ಶನ"



ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಪ್ರಿಯಾಂಕ ಖರ್ಗೆಯವರ ನೇತೃತ್ವದಲ್ಲಿ ಜನತಾ ದರ್ಶನ ಹಾಗೂ ಜನಸ್ಪಂದನ ಕಾರ್ಯಕ್ರಮದಲ್ಲಿ ಅಹವಾಲು ಸ್ವೀಕಾರ ತಾಲೂಕ ಕ್ರೀಡಾಂಗಣ ಚಿಂಚೋಳಿ 
ಹಾಗೂ
 ಮಾನ್ಯ ಸಚಿವರಿಂದ ಆದರ್ಶವಿದ್ಯಾಲಯ ಪೋಲಕಪಳ್ಳಿ ಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ 

 

Friday, September 1, 2023

ಸ್ವಚ್ಛತಾ ಪಕ್ವಾಡ್ ಕಾರ್ಯಕ್ರಮ

 ಸ.ಹಿ.ಪ್ರಾ.ಶಾಲೆ ಅಡಕಿಮೊಕ ತಾಂಡಾ ಶಾಲೆಯಲ್ಲಿ ಸ್ವಚ್ಛತಾ ಪಕ್ವಾಡ್ ಕಾರ್ಯಕ್ರಮವನ್ನು  ಸಸಿ ನೆಡುವುದರ ಮೂಲಕ ಅದ್ಧೂರಿ ಪ್ರಾರಂಭ

ಸ್ವಚ್ಛತಾ ಪಕ್ವಾಡ್ ಕಾರ್ಯಕ್ರಮ -2023

ಅಥವಾ

CLICK HERE